ನೀನೇನೆಂದು ಅರಿವಾಗುವ
ಮೊದಲೇ ಬದಲಾಗಿ ಹೋಗುವೆ.
ನಿನ್ನೊಳಗಿನ ಪ್ರತಿ ಮಿಳಿತ
ಏರಿಳಿತಗಳ ಅನುಭವಿಸಿ
ಅಥೈಸಿಕೊಂಡವರಿಗೂ ಒಗಟಾಗಿರುವೆ
ಯಾರಿಗಾಗಿ ಈ ನಿಗೂಢತೆ?
ಯಾತಕಾಗಿ ಈ ಅನಿಶ್ಚಿತತೆ?
ಅಥವಾ ನೀನಾರೆಂಬುದು ನಿನಗೇ ಪ್ರಶ್ನೆಯೆ?
ಉತ್ತರ ಹುಡುಕಿ,ನೀ ಹತ್ತಿರ ಬಂದು
ನಕ್ಕರೆ ಸಾಕು,ಸುತ್ತಲ ಜಗತ್ತು
ಬೆಚ್ಚಗೆ ಬೆಳಗುತ್ತದೆ;
ಮೌನವೂ ಮಾತಾಡುತ್ತದೆ!
Subscribe to:
Post Comments (Atom)
ತುಂಬಾ ಚೆನ್ನಾಗಿದೆ ....keep on writing.. .ನನಗಂತೂ ತುಂಬಾ ಇಷ್ಟ ಆಯ್ತು....
ReplyDelete