ವಿರಹ - ಉಕ್ಕಿ ಹರಿಯುವ ಪ್ರೀತಿಗೆ ದೇವರು ಕಟ್ಟುವ ಅಣೆಕಟ್ಟು!
***
ತೀರದ ಕಡಲಿನಂತಾ ಪ್ರೀತಿ ನನ್ನಲ್ಲಿಟ್ಟು, ಕಡಲಾಚೆಯ ತೀರಕೆ ನೀ ಹೋಗಲೇಬೇಕೇ..??
***
ನನ್ನ ಮುಂಜಾವಿಗೆ ನಿನ್ನ ಇರುಳಿನ ನೆರಳು;
ಎದ್ದೆನೆಂದೆ, ಕಣ್ಗಳು ಅರಳಲಿಲ್ಲ
ನನ್ನ ಇರುಳಿಗೆ ನಿನ್ನ ಹಗಲಿನ ಬೆಳಕು;
ಮಲಗಿದೆನೆಂದೆ, ರೆಪ್ಪೆಗಳು ಕೂಡಲಿಲ್ಲ!!
***
Thursday, August 25, 2011
Friday, July 1, 2011
ಫಲಿಸಿತು ಪ್ರೇಮ
ನಮ್ಮನೆಯ ಸೂರಂಚಲ್ಲಿ ಒಂದು ಹೂಬಳ್ಳಿ ನೆಟ್ಟೆ
ತಿಂಗಳಿಗೊಮ್ಮೆ ತಪ್ಪದೇ ಹೂಬಿಡುವ
ಅಪರೂಪದ ಬಳ್ಳಿಗೆ ನನ್ನದೇ ಹೆಸರನಿಟ್ಟೆ
ಮೂರು ದಿನ ಅರಳಿ ಮುದುಡುವ ಹೂವಿನ
ನಿರೀಕ್ಷೆಯಲ್ಲಿ ದುಂಬಿಯೊಂದು ದಿನವೂ
ಬಳ್ಳಿಯ ಮೈತಾಕುತಿತ್ತು
ದುಂಬಿಯ ಒಲವಿಗೆ ಬಳ್ಳಿಯ
ನಲಿವು ಇಮ್ಮಡಿಸುತಿತ್ತು
ಬಿಸಿಲು ಏರಲಿ, ಬೆಳಕು ಜಾರಲಿ
ಬಳ್ಳಿಗೆ ದುಂಬಿಯ ಝೇಂಕಾರವೇ ಸರ್ವಸ್ವ
ವಸಂತ ಹೊರಳಲಿ, ವರ್ಷ ಕರಗಿ ಹರಿಯಲಿ
ದುಂಬಿಗೆ ಬಳ್ಳಿಯ ವಯ್ಯಾರವೇ ಅಸ್ತಿತ್ವ.
ಹೂವರಳಿ ಬಳ್ಳಿ ಸೊಬಗಾದರೆ
ದುಂಬಿಗೆ ಹಬ್ಬದೂಟ
ಹೂವು ಮುದುಡಿ ಜಾರಿತೇ,
ಮುಂದಿನ ಮೊಗ್ಗಿನ ನಿರೀಕ್ಷೆಯಲ್ಲಿ
ಸಾಗುವುದು ದಿನದಾಟ
ಮಾಸಗಳು ಮರಳಿದವು,
ಋತುಗಳು ಹಿಂತಿರುಗಿದವು
ಹೂವು ಅರಳಿತು, ಮುದುಡಿತು
ಜೀವ ಜಾರದೆ ಹೀಚು ಕಟ್ಟಿತು!
ಬಳ್ಳಿ ಬಾಗಿದೆ ಫಲದ ಭಾರಕೆ
ದುಂಬಿ ಬೀಗಿದೆ ಹಮ್ಮು ಹೆಮ್ಮೆಗೆ,
ಫಲವು ಮಾಗಲಿ, ಹಣ್ಣು ತೂಗಲಿ
ಜಗವ ಉಳಿಸಿ ಬೆಳೆಸಲಿ ಇಂಥ ಪ್ರೇಮ!!
ತಿಂಗಳಿಗೊಮ್ಮೆ ತಪ್ಪದೇ ಹೂಬಿಡುವ
ಅಪರೂಪದ ಬಳ್ಳಿಗೆ ನನ್ನದೇ ಹೆಸರನಿಟ್ಟೆ
ಮೂರು ದಿನ ಅರಳಿ ಮುದುಡುವ ಹೂವಿನ
ನಿರೀಕ್ಷೆಯಲ್ಲಿ ದುಂಬಿಯೊಂದು ದಿನವೂ
ಬಳ್ಳಿಯ ಮೈತಾಕುತಿತ್ತು
ದುಂಬಿಯ ಒಲವಿಗೆ ಬಳ್ಳಿಯ
ನಲಿವು ಇಮ್ಮಡಿಸುತಿತ್ತು
ಬಿಸಿಲು ಏರಲಿ, ಬೆಳಕು ಜಾರಲಿ
ಬಳ್ಳಿಗೆ ದುಂಬಿಯ ಝೇಂಕಾರವೇ ಸರ್ವಸ್ವ
ವಸಂತ ಹೊರಳಲಿ, ವರ್ಷ ಕರಗಿ ಹರಿಯಲಿ
ದುಂಬಿಗೆ ಬಳ್ಳಿಯ ವಯ್ಯಾರವೇ ಅಸ್ತಿತ್ವ.
ಹೂವರಳಿ ಬಳ್ಳಿ ಸೊಬಗಾದರೆ
ದುಂಬಿಗೆ ಹಬ್ಬದೂಟ
ಹೂವು ಮುದುಡಿ ಜಾರಿತೇ,
ಮುಂದಿನ ಮೊಗ್ಗಿನ ನಿರೀಕ್ಷೆಯಲ್ಲಿ
ಸಾಗುವುದು ದಿನದಾಟ
ಮಾಸಗಳು ಮರಳಿದವು,
ಋತುಗಳು ಹಿಂತಿರುಗಿದವು
ಹೂವು ಅರಳಿತು, ಮುದುಡಿತು
ಜೀವ ಜಾರದೆ ಹೀಚು ಕಟ್ಟಿತು!
ಬಳ್ಳಿ ಬಾಗಿದೆ ಫಲದ ಭಾರಕೆ
ದುಂಬಿ ಬೀಗಿದೆ ಹಮ್ಮು ಹೆಮ್ಮೆಗೆ,
ಫಲವು ಮಾಗಲಿ, ಹಣ್ಣು ತೂಗಲಿ
ಜಗವ ಉಳಿಸಿ ಬೆಳೆಸಲಿ ಇಂಥ ಪ್ರೇಮ!!
Monday, December 20, 2010
ಮಳೆಯೊಡನೆ ಒಂದು ಸ್ಮರಣೆ
ಸುರಿವ ಬಿರುಮಳೆಯ
ಹನಿಯ ಅಡಿಯಲ್ಲಿ,
ಚಿಕ್ಕ ಮಗುವಂತೆ ಹೋಗಿ ನಿಲ್ಲುವಾಸೆ
ಒಳಗೆ ಹೆದರಿದ ಅಮ್ಮ
ಬಂದು ಕರೆಯುವ ಮುನ್ನ,
ಮರದ ಅಡಿಯಲಿ ನಿಂತು ನಲಿಯುವಾಸೆ
ಕೆಸರು ಕಾಲಲಿ ಬಂದು,
ಒದ್ದೆ ಮೈಯಲಿ ನಿಂದು,
ಅಪ್ಪನೆದುರಲಿ ಅಡಗಿ ನಡುಗುವಾಸೆ.
ಓ ಸುರಿವ ಬಿರುಮಳೆಯೆ,
ಮತ್ತೆ ಬಾಲ್ಯವ ಬಾಳಲ್ಲಿ ಸ್ಪುರಿಸು,
ಹಳೆಯ ಅನುಭವ ಮತ್ತೆ ಪಡೆಯುವಾಸೆ..
ಹನಿಯ ಅಡಿಯಲ್ಲಿ,
ಚಿಕ್ಕ ಮಗುವಂತೆ ಹೋಗಿ ನಿಲ್ಲುವಾಸೆ
ಒಳಗೆ ಹೆದರಿದ ಅಮ್ಮ
ಬಂದು ಕರೆಯುವ ಮುನ್ನ,
ಮರದ ಅಡಿಯಲಿ ನಿಂತು ನಲಿಯುವಾಸೆ
ಕೆಸರು ಕಾಲಲಿ ಬಂದು,
ಒದ್ದೆ ಮೈಯಲಿ ನಿಂದು,
ಅಪ್ಪನೆದುರಲಿ ಅಡಗಿ ನಡುಗುವಾಸೆ.
ಓ ಸುರಿವ ಬಿರುಮಳೆಯೆ,
ಮತ್ತೆ ಬಾಲ್ಯವ ಬಾಳಲ್ಲಿ ಸ್ಪುರಿಸು,
ಹಳೆಯ ಅನುಭವ ಮತ್ತೆ ಪಡೆಯುವಾಸೆ..
Wednesday, December 1, 2010
ಅಗಲಿಕೆ
ನನ್ನೂರ ನನ್ನವರ ತೊರೆದು
ಹೊರಡುವ ಕ್ಷಣಕೆ
ಎದೆಯ ಕನಲಿಕೆ, ಮನದ ಬವಳಿಕೆ,
ಕಣ್ಹನಿ, ಜೊತೆಗೆ ಬಿಕ್ಕಳಿಕೆ;
ಹೃದಯ ತಾಯ್ನೆಲದಿ ಬೇರು ಬಿಟ್ಟಿತ್ತು.
ಕಾಣದ ಊರಿಗೆ, ಅರಿಯದ ದಾರಿಗೆ
ಹೊಸ ಅನುಭವದ ನಾಂದಿಗೆ
ಕಾಣದ ದೈವ ಶುಭ ಹಾರೈಸಿತ್ತು.
ದಾರಿ ದೀಪದಂತೆ ಜೊತೆಯಾಗಿತ್ತು.
ನನ್ನದಲ್ಲದ ಮಣ್ಣಲಿ, ಒಂಟಿತನದ ನೋವಲಿ
ನಡುಗುವ ಪಾದದ ಪ್ರತಿ ಬೆರಳಲಿ
ಹೆಜ್ಜೆ ಗುರುತು ಮೂಡಿಸುವ ಕನಸಿತ್ತು.
ಅಪರಿಚಿತ ಗೂಡಿಗೆ 'ಮನೆ' ಎನ್ನಲಾಗದೆ
ತುಂಬಿದ ಕಂಗಳ ಕಟ್ಟಿಡಲಾಗದೆ
ತೆರೆದೆ ಬಾಗಿಲ,ದಾಟಿ ನೆಡೆದೆ
ಹೊಸ ಸ್ನೇಹದ ಸಹಬಾಳ್ವೆ ನನ್ನ ಕಾದಿತ್ತು.
ತನ್ನ ಬಳಿ ಕರೆದಿತ್ತು.
ಅಲ್ಲಿ ಮನವನು ಬಿಟ್ಟು,
ಪುಟ್ಟ ಕನಸನು, ದಟ್ಟ ದುಖವ ಹೊತ್ತು,
ದಾಟಿ ಬಂದ ಹಾದಿ ಮುಗಿದಿದೆ.
ತಿರುಗಿ ನಡೆಯುವ ಬಯಕೆಗೆ
ಹಾರಿ ಸಾಗುವ ರೆಕ್ಕೆಗೆ
ಸವಿ ನೆನಪುಗಳ ಪುಕ್ಕ ಮೂಡಿದೆ.
ಮತ್ತೆ ತನು ಮನ ಅರಳುವ ಕ್ಷಣಕೆ
ಕಳೆದ ದಿನಗಳೇ ಕಾಣಿಕೆ.
ಅಗಲಿಕೆಯೇ ಶೀರ್ಷಿಕೆ
ಜೀವನ ಕಲಿಸುವ ಪಾಠಕೆ!
ಹೊರಡುವ ಕ್ಷಣಕೆ
ಎದೆಯ ಕನಲಿಕೆ, ಮನದ ಬವಳಿಕೆ,
ಕಣ್ಹನಿ, ಜೊತೆಗೆ ಬಿಕ್ಕಳಿಕೆ;
ಹೃದಯ ತಾಯ್ನೆಲದಿ ಬೇರು ಬಿಟ್ಟಿತ್ತು.
ಕಾಣದ ಊರಿಗೆ, ಅರಿಯದ ದಾರಿಗೆ
ಹೊಸ ಅನುಭವದ ನಾಂದಿಗೆ
ಕಾಣದ ದೈವ ಶುಭ ಹಾರೈಸಿತ್ತು.
ದಾರಿ ದೀಪದಂತೆ ಜೊತೆಯಾಗಿತ್ತು.
ನನ್ನದಲ್ಲದ ಮಣ್ಣಲಿ, ಒಂಟಿತನದ ನೋವಲಿ
ನಡುಗುವ ಪಾದದ ಪ್ರತಿ ಬೆರಳಲಿ
ಹೆಜ್ಜೆ ಗುರುತು ಮೂಡಿಸುವ ಕನಸಿತ್ತು.
ಅಪರಿಚಿತ ಗೂಡಿಗೆ 'ಮನೆ' ಎನ್ನಲಾಗದೆ
ತುಂಬಿದ ಕಂಗಳ ಕಟ್ಟಿಡಲಾಗದೆ
ತೆರೆದೆ ಬಾಗಿಲ,ದಾಟಿ ನೆಡೆದೆ
ಹೊಸ ಸ್ನೇಹದ ಸಹಬಾಳ್ವೆ ನನ್ನ ಕಾದಿತ್ತು.
ತನ್ನ ಬಳಿ ಕರೆದಿತ್ತು.
ಅಲ್ಲಿ ಮನವನು ಬಿಟ್ಟು,
ಪುಟ್ಟ ಕನಸನು, ದಟ್ಟ ದುಖವ ಹೊತ್ತು,
ದಾಟಿ ಬಂದ ಹಾದಿ ಮುಗಿದಿದೆ.
ತಿರುಗಿ ನಡೆಯುವ ಬಯಕೆಗೆ
ಹಾರಿ ಸಾಗುವ ರೆಕ್ಕೆಗೆ
ಸವಿ ನೆನಪುಗಳ ಪುಕ್ಕ ಮೂಡಿದೆ.
ಮತ್ತೆ ತನು ಮನ ಅರಳುವ ಕ್ಷಣಕೆ
ಕಳೆದ ದಿನಗಳೇ ಕಾಣಿಕೆ.
ಅಗಲಿಕೆಯೇ ಶೀರ್ಷಿಕೆ
ಜೀವನ ಕಲಿಸುವ ಪಾಠಕೆ!
Wednesday, August 25, 2010
ತೀರದ ಬಯಕೆ
ನನ್ನ ಅಂಗೈಯಮೇಲೆ
ನಿನ್ನ ಭರವಸೆಗಳ ಕರ್ಪೂರ ಉರಿಸಿ
ನೆಡೆಸಿದೆ ಪ್ರೀತಿ ಹರಕೆಯ ಪರೀಕ್ಷೆ.
ಕರ್ಪೂರ ಕರಗಿ ಕಂಪು ತೀರಿದೆ
ಬಿರು ಬಿಸಿಯೂ ಆರಿ ಕಪ್ಪು ಕಲೆಯಾಗಿದೆ
ಈಡೇರಿಸು ನನ್ನ ನಿರೀಕ್ಷೆ,
ಕೊನೆಗಾಣಿಸು ಈ ಭ್ರಮಾ ಬದುಕಿನ ಶಿಕ್ಷೆ.
ನಿನ್ನ ಭರವಸೆಗಳ ಕರ್ಪೂರ ಉರಿಸಿ
ನೆಡೆಸಿದೆ ಪ್ರೀತಿ ಹರಕೆಯ ಪರೀಕ್ಷೆ.
ಕರ್ಪೂರ ಕರಗಿ ಕಂಪು ತೀರಿದೆ
ಬಿರು ಬಿಸಿಯೂ ಆರಿ ಕಪ್ಪು ಕಲೆಯಾಗಿದೆ
ಈಡೇರಿಸು ನನ್ನ ನಿರೀಕ್ಷೆ,
ಕೊನೆಗಾಣಿಸು ಈ ಭ್ರಮಾ ಬದುಕಿನ ಶಿಕ್ಷೆ.
Monday, July 12, 2010
ನಾ ಸ್ವಾರ್ಥಿಯಾದೆ
ಮರೆತು ಬಿಡು ನಿನ್ನೆಗಳ ನೆನಪನ್ನು
ಜೊತೆಯಾಗಿ ನಕ್ಕ ದಿನಗಳನು..
ಮತ್ತೆ ಎಣಿಸದಿರು ಅತ್ತು ಹಗುರಾದ ಕಣ್ಹನಿಗಳನು
ನೋವ ಮರೆತು ನಲಿದ ನೂರು ಕ್ಷಣಗಳನು..
ನನಗೆ ನನ್ನದೇ ದಾರಿಯಲಿ
ಹೊಸ ನೆನ್ನೆಗಳಿವೆ ನೆನೆಯಲು,ನಲಿಯಲು..
ಹೊಸ ನಾಳೆಗಳಿವೆ ಹಳೆಯ ನೋವುಗಳ ಮರೆಸಲು..
ನಿನ್ನ ಕತ್ತಲೆ ಬದುಕಲ್ಲಿ ಮತ್ತೆ ಮತ್ತೆ ನೆನೆಯದಿರು ನನ್ನನ್ನು
ನಿನ್ನೆದೆಯಲ್ಲಿ ಮೀಟುವ ನೋವು
ಅಳಿಸದಿರಲಿ ನನ್ನ ಬದುಕಿನ ಬೆಳಕನ್ನು..
ಜೊತೆಯಾಗಿ ನಕ್ಕ ದಿನಗಳನು..
ಮತ್ತೆ ಎಣಿಸದಿರು ಅತ್ತು ಹಗುರಾದ ಕಣ್ಹನಿಗಳನು
ನೋವ ಮರೆತು ನಲಿದ ನೂರು ಕ್ಷಣಗಳನು..
ನನಗೆ ನನ್ನದೇ ದಾರಿಯಲಿ
ಹೊಸ ನೆನ್ನೆಗಳಿವೆ ನೆನೆಯಲು,ನಲಿಯಲು..
ಹೊಸ ನಾಳೆಗಳಿವೆ ಹಳೆಯ ನೋವುಗಳ ಮರೆಸಲು..
ನಿನ್ನ ಕತ್ತಲೆ ಬದುಕಲ್ಲಿ ಮತ್ತೆ ಮತ್ತೆ ನೆನೆಯದಿರು ನನ್ನನ್ನು
ನಿನ್ನೆದೆಯಲ್ಲಿ ಮೀಟುವ ನೋವು
ಅಳಿಸದಿರಲಿ ನನ್ನ ಬದುಕಿನ ಬೆಳಕನ್ನು..
Tuesday, June 29, 2010
ಹಾರೈಕೆ
ಸದಾ ನಿನ್ನ ಕಣ್ಣಂಚಿನ ಖುಷಿಯಲ್ಲಿ
ನನಗೊಂದು ಸಣ್ಣ ಪಾಲಿರಲಿ.
ರೆಪ್ಪೆಯಡಿ ಕಣ್ಣ ಹನಿ ಮೂಡಿದಲ್ಲಿ
ನಿನ್ನ ನೋವ ಹಿಂದಿನ ಮೌನ ನಾನಾಗದಿರಲಿ..
ನನಗೊಂದು ಸಣ್ಣ ಪಾಲಿರಲಿ.
ರೆಪ್ಪೆಯಡಿ ಕಣ್ಣ ಹನಿ ಮೂಡಿದಲ್ಲಿ
ನಿನ್ನ ನೋವ ಹಿಂದಿನ ಮೌನ ನಾನಾಗದಿರಲಿ..
Subscribe to:
Posts (Atom)
