ನನ್ನೂರ ನನ್ನವರ ತೊರೆದು
ಹೊರಡುವ ಕ್ಷಣಕೆ
ಎದೆಯ ಕನಲಿಕೆ, ಮನದ ಬವಳಿಕೆ,
ಕಣ್ಹನಿ, ಜೊತೆಗೆ ಬಿಕ್ಕಳಿಕೆ;
ಹೃದಯ ತಾಯ್ನೆಲದಿ ಬೇರು ಬಿಟ್ಟಿತ್ತು.
ಕಾಣದ ಊರಿಗೆ, ಅರಿಯದ ದಾರಿಗೆ
ಹೊಸ ಅನುಭವದ ನಾಂದಿಗೆ
ಕಾಣದ ದೈವ ಶುಭ ಹಾರೈಸಿತ್ತು.
ದಾರಿ ದೀಪದಂತೆ ಜೊತೆಯಾಗಿತ್ತು.
ನನ್ನದಲ್ಲದ ಮಣ್ಣಲಿ, ಒಂಟಿತನದ ನೋವಲಿ
ನಡುಗುವ ಪಾದದ ಪ್ರತಿ ಬೆರಳಲಿ
ಹೆಜ್ಜೆ ಗುರುತು ಮೂಡಿಸುವ ಕನಸಿತ್ತು.
ಅಪರಿಚಿತ ಗೂಡಿಗೆ 'ಮನೆ' ಎನ್ನಲಾಗದೆ
ತುಂಬಿದ ಕಂಗಳ ಕಟ್ಟಿಡಲಾಗದೆ
ತೆರೆದೆ ಬಾಗಿಲ,ದಾಟಿ ನೆಡೆದೆ
ಹೊಸ ಸ್ನೇಹದ ಸಹಬಾಳ್ವೆ ನನ್ನ ಕಾದಿತ್ತು.
ತನ್ನ ಬಳಿ ಕರೆದಿತ್ತು.
ಅಲ್ಲಿ ಮನವನು ಬಿಟ್ಟು,
ಪುಟ್ಟ ಕನಸನು, ದಟ್ಟ ದುಖವ ಹೊತ್ತು,
ದಾಟಿ ಬಂದ ಹಾದಿ ಮುಗಿದಿದೆ.
ತಿರುಗಿ ನಡೆಯುವ ಬಯಕೆಗೆ
ಹಾರಿ ಸಾಗುವ ರೆಕ್ಕೆಗೆ
ಸವಿ ನೆನಪುಗಳ ಪುಕ್ಕ ಮೂಡಿದೆ.
ಮತ್ತೆ ತನು ಮನ ಅರಳುವ ಕ್ಷಣಕೆ
ಕಳೆದ ದಿನಗಳೇ ಕಾಣಿಕೆ.
ಅಗಲಿಕೆಯೇ ಶೀರ್ಷಿಕೆ
ಜೀವನ ಕಲಿಸುವ ಪಾಠಕೆ!
Subscribe to:
Post Comments (Atom)
ನಾನು ಈ ಕವನವನ್ನು ಬರೆದ ಸಂಧರ್ಭವನ್ನುಈಗಲೆ ಹೇಳುವುದಿಲ್ಲ.
ReplyDeleteಓದಿದ ನಂತರ ನಿಮಗೆ ಇದು ಯಾವ ಸಂಧರ್ಭದಲ್ಲಿ ಬರೆದಿರಬಹುದೆಂದು ಅನ್ನಿಸುತ್ತದೆ ಎಂಬುದನ್ನು ತಿಳಿಸಿ. :)
ಗ್ರೀಷ್ಮಾ,
ReplyDeleteಕವನ ಚೆನ್ನಾಗಿದ್ದು.
ಮದವೆಯಾಗಿ ಹೋಗಬೇಕಿದ್ರೆ ಬರೆದಿದ್ದ?
I can imagine :)
ReplyDelete--rajshekar
But wish you all the best in your new aparchita goodu
ReplyDeleteನಾನು ಇವತ್ತೇ ಬ್ಲಾಗ್ ಗೆ ಬಂದಿ
ReplyDeleteರಾಶಿ ಚೊಲೋ ಇದ್ದು
ಅದರಲ್ಲೂ
ಕಾಣದ ಊರಿಗೆ, ಅರಿಯದ ದಾರಿಗೆ
ಹೊಸ ಅನುಭವದ ನಾಂದಿಗೆ
ಕಾಣದ ದೈವ ಶುಭ ಹಾರೈಸಿತ್ತು.
ದಾರಿ ದೀಪದಂತೆ ಜೊತೆಯಾಗಿತ್ತು.
ಸಾಲು ರಾಶಿ ಇಷ್ಟಾ ಆತು
Gree, surprised to see a non romantic poem from u ;)..
ReplyDeletekavana tumba chennagide..very good choice of phrases. yellaru relate maDko bahudu..Kishore Kumar sad songs thara, morose mood nalli vodidre im sure the reader will cry his heart out ;)..
gd poem really! agaga baree tha ire..dont get too busy for writng!!
Luv,
Spoo
ತವರು ಮನೆ ಬಿಟ್ಟು ಹೊರಡುವ ಹೆಣ್ಮನದ ಭಾವವನ್ನು ಸುಂದರವಾಗಿ ಬಣ್ಣಿಸಿದ್ದಿರಿ..ಸುಂದರ ಸಾಲುಗಳು...
ReplyDeleteನನ್ನ ಮಾನಸರಂಗಕ್ಕೂ ಒಮ್ಮೆ ಬನ್ನಿ
btw, i guess u wrote it when u went onsite..me rt???? we shud catch up on the weekn..!
ReplyDeletenice poem. I liked the last paragraph the most. Keep writing...
ReplyDeletebeautiful writings greeshma...didnt know there is such a great writer hidden in u..god going kip it up...maavanige thakka sose...!!!
ReplyDeleteExcellent !! Last line makes lot of sense -ಅಗಲಿಕೆಯೇ ಶೀರ್ಷಿಕೆ
ReplyDeleteಜೀವನ ಕಲಿಸುವ ಪಾಠಕೆ!
I really liked this poem.
Hi greeshma,
ReplyDeleteA wonderful poem. Every girl would be moved by this poem. You have given words to the sentiment and dilemma that a bride goes through and which she tries cover up with a smile.
Sorry i don't have baraha.
Good job
Norma.
Your PU classmate if you remember.