Monday, July 12, 2010

ನಾ ಸ್ವಾರ್ಥಿಯಾದೆ

ಮರೆತು ಬಿಡು ನಿನ್ನೆಗಳ ನೆನಪನ್ನು
ಜೊತೆಯಾಗಿ ನಕ್ಕ ದಿನಗಳನು..

ಮತ್ತೆ ಎಣಿಸದಿರು ಅತ್ತು ಹಗುರಾದ ಕಣ್ಹನಿಗಳನು
ನೋವ ಮರೆತು ನಲಿದ ನೂರು ಕ್ಷಣಗಳನು..

ನನಗೆ ನನ್ನದೇ ದಾರಿಯಲಿ
ಹೊಸ ನೆನ್ನೆಗಳಿವೆ ನೆನೆಯಲು,ನಲಿಯಲು..
ಹೊಸ ನಾಳೆಗಳಿವೆ ಹಳೆಯ ನೋವುಗಳ ಮರೆಸಲು..

ನಿನ್ನ ಕತ್ತಲೆ ಬದುಕಲ್ಲಿ ಮತ್ತೆ ಮತ್ತೆ ನೆನೆಯದಿರು ನನ್ನನ್ನು
ನಿನ್ನೆದೆಯಲ್ಲಿ ಮೀಟುವ ನೋವು
ಅಳಿಸದಿರಲಿ ನನ್ನ ಬದುಕಿನ ಬೆಳಕನ್ನು..

3 comments:

  1. ಗೆಳೆಯನೊಬ್ಬನ ಅಳಲ ಕೇಳಿ ಹೊಳೆದ ಸಾಲುಗಳು..
    ಅವನ ಹುಡುಗಿ ಇಷ್ಟು ಸ್ವಾರ್ಥಿಯಾಗಬಹುದೇ???

    ReplyDelete
  2. ಗ್ರೀಷ್ಮ- ವಿಶಾದದ ಭಾವನೆಗಳು ಚೆನ್ನಾಗಿ ಮೂಡಿ ಬಂದಿವೆ. ಕೊನೆಯ ಸಾಲು ಇಷ್ಟವಾಯಿತು.. ನೊಂದ ಜೀವವೊಂದು ಮತ್ತೊಂದು ಜೀವಕೆ ಮಾಡುತಿರುವ ಅರಿಕೆ ಹ್ರುದಯ ಮುಟ್ಟುತ್ತದೆ.. ವಿಶಾದದ ಸಾಲುಗಳಿಗಿರುವ ಶಕ್ತಿ ಇನ್ಯಾವ ಭಾವನೆಗಳ ಸಾಲಿಗು ಪ್ರಾಯಶಃ ಇರಲಾರದು..

    ನಿಮ್ಮ ಗೆಳೆಯನಿಗೆ ಪ್ರೀತಿ ತುಂಬುವ ಜೀವವೊಂದು ಎಲ್ಲೋ ಇರುತ್ತದೆ.. ಅವರಿಗೆ ಅದು ಬೇಗ ಸಿಗಲಿ...

    ReplyDelete
  3. chennagide kaNe..has a gud poetic flow too :D

    ReplyDelete